CATEGORIES

NEWSLETTER


ಬ್ರಹ್ಮಸೂತ್ರಗಳು

Saturday, September 1st, 2012

ಬ್ರಹ್ಮ(ಪರಿಪೂರ್ಣ ಭಗವಂತ)ನಿಗೆ ಸಂಭಂದಪಟ್ಟ ವಿಷಯದ ಕುರಿತಾಗಿ ಸರ್ವ ರೀತಿಯಿಂದಲೂ ಸಂಪೂರ್ಣವಾಗಿ ಚರ್ಚಿಸುವುದರಿಂದ ಈ ಕೃತಿಗೆ ಆ ಹೆಸರು ಬರಲು ಮೂಲ ಕಾರಣ. ಅದನ್ನು ನಾನಾ ವಿಧವಾದ ಹೆಸರುಗಳಿಂದಲೂ ಕರೆಯುತ್ತಾರೆ, ಅವು ಈ ರೀತಿಯಾಗಿ ಇವೆ: ೧) ವೇದಾಂತ ಸೂತ್ರಾ – ಇದು ವೇದಾಂತ ಅಥವಾ ಉಪನಿಷತ್ತಿನ ವಿಷಯಕ್ಕೆ ಸಂಭಂದಿಸಿದ್ದರಿಂದ, ೨) ಶಾರೀರಿಕ ಸೂತ್ರಾ – ಏಕೆಂದರೆ ಇದು ಶರೀರದಲ್ಲಿ ನೆಲೆಸಿರುವ ಆತ್ಮನ ವಿಚಾರವಾಗಿ ಚರ್ಚಿಸುವುದರಿಂದ, ೩) ಉತ್ತರ ಮೀಮಾಂಸ ಸೂತ್ರಾ – […]

‘ಮೀಮಾಂಸಾ’ ದರ್ಶನ

Wednesday, August 29th, 2012

ಪರಿಚಯ           ಹಿಂದೂ ತತ್ವಶಾಸ್ತ್ರದಲ್ಲಿ ಯಾವುದಾದರೂ ಪದ್ದತಿಯಲ್ಲಿ ಗ್ರಂಥ ಕರ್ತೃವಿಗಿಂತ ಆ ಗ್ರಂಥವೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ಅದು ‘ಮೀಮಾಂಸಾ’ ದರ್ಶನ ಮಾತ್ರವೇ. ಇದನ್ನು ‘ಪೂರ್ವಮೀಮಾಂಸ ದರ್ಶನ’ವೆಂದೂ ಕರೆದಿದ್ದಾರೆ; ಇದು ಪ್ರಾಥಮಿಕವಾಗಿ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಕ್ಲಿಷ್ಟವಾದ ಯಜ್ಞ-ಯಾಗಾದಿಗಳ ವಿಧಿ-ವಿಧಾನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದನ್ನು ಕ್ರಮಬದ್ಧವಾಗಿ ತಿಳಿಸಿಕೊಡುತ್ತದೆ. ವೈದಿಕ ವಿಧಿ-ವಿಧಾನಗಳು ನಂಬುವುದೇನೆಂದರೆ: (೧) ‘ಆತ್ಮ’ ಎನ್ನುವ ವಸ್ತುವೊಂದು ಇದ್ದು; ಅದು ದೇಹದ ಮರಣವನ್ನು ಅಧಿಗಮಿಸಿ ನಾವು ಮಾಡಿದ ಯಜ್ಞಯಾಗಾದಿಗಳ ಫಲವನ್ನು ಸ್ವರ್ಗದಲ್ಲಿ ಅನುಭವಿಸುತ್ತದೆ. (೨) ಅಗೋಚರ ಶಕ್ತಿಯೆನ್ನುವುದೊಂದಿದ್ದು ಅದು ಯಜ್ಞಯಾಗಾದಿಗಳ […]

ನ್ಯಾಯ ದರ್ಶನ

Saturday, August 18th, 2012

ಪರಿಚಯ:           ಭಾರತೀಯ ತತ್ವಜ್ಞಾನದಲ್ಲಿ ಆಸ್ತಿಕ (ವೇದಗಳನ್ನು ಒಪ್ಪಿಕೊಳ್ಳುವ) ದರ್ಶನೆಗಳೆಂದು ವರ್ಗೀಕರಿಸಲ್ಪಟ್ಟಿರುವ ಆರು ದರ್ಶನಗಳಲ್ಲಿ ಗೋತಮ ಅಥವಾ ಗೌತಮ(ಕ್ರಿ.ಪೂ.೫೫೦)ನು ಪ್ರತಿಪಾದಿಸಿದ ‘ಅಕ್ಷಪಾದ’ ಎಂದೂ ಕರೆಯಲ್ಪಡುವ ‘ನ್ಯಾಯ ದರ್ಶನ’ ಮೊದಲಿನದು. (ವೇದಗಳನ್ನು ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ ಎನ್ನುವುದನ್ನು ಗಮನಿಸಿ.) ಕೆಲವೊಮ್ಮೆ ನ್ಯಾಯ ದರ್ಶನವನ್ನು ಉಲೂಕ ಅಥವಾ ಕಣಾದನ (ಕ್ರಿ.ಪೂ. ೬೦೦ ) ‘ವೈಶೇಷಿಕ ದರ್ಶನ’ದೊಂದಿಗೆ ಒಂದೇ ಆಗಿ ಗುರುತಿಸಿದರೂ ಕೂಡ ‘ನ್ಯಾಯ ದರ್ಶನ’ಕ್ಕೆ ತನ್ನದೇ ಆದ ಪ್ರತ್ಯೇಕತೆಯಿದೆ. ಆದ್ದರಿಂದ ಇದನ್ನು ಬೇರೆ ಮತ್ತು […]

ಯೋಗದರ್ಶನ

Saturday, August 18th, 2012

ಪರಿಚಯ           ಭಾರತೀಯ ತತ್ವಶಾಸ್ತ್ರ ಪದ್ಧತಿಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯ ತತ್ವ ಸಿದ್ಧಾಂತಗಳಂತೆ, ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಭಿಸದೆ ಭಾರತೀಯ ತತ್ವಶಾಸ್ತ್ರವು ಸತ್ಯದ ‘ದರ್ಶನ’ ಅಥವಾ ‘ನೋಟ’ ಅಥವಾ ‘ಅನುಭವ’ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದ ‘ದರ್ಶನ’ ಪದವು ಹೆಚ್ಚು ಸೂಕ್ತವೆನಿಸುತ್ತದೆ. ಈ ದರ್ಶನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ – ಆಸ್ತಿಕ ಮತ್ತು ನಾಸ್ತಿಕ. ಯಾವುವು ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿವೆಯೋ ಅವು ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. […]

ಸಾಂಖ್ಯ ದರ್ಶನ

Friday, August 17th, 2012

ಪರಿಚಯ:           ತನ್ನ ಚಿಂತನೆಗಳನ್ನು ಪ್ರತಿಪಾದಿಸಿ, ತದನಂತರ ಉಪನಿಷತ್ತುಗಳಲ್ಲಿ ಉಲ್ಲೇಖಿಸಿರುವ ವಾಕ್ಯಗಳ ಆಧಾರದಿಂದ ಅವುಗಳನ್ನು ಗಟ್ಟಿಗೊಳಿಸಿ ಬ್ರಹ್ಮಸೂತ್ರವನ್ನು ರಚಿಸಿರುವ ಬಾದರಾಯಣನು ತನ್ನ ಟೀಕೆಯನ್ನು ಸಾಂಖ್ಯ ಪದ್ಧತಿಯೊಂದಿಗೆ ಪ್ರಾರಂಭಿಸಿದ್ದಾನೆ (೨.೨.೧). ಬ್ರಹ್ಮಸೂತ್ರದ ೧.೪.೨೮ ಶ್ಲೋಕಕ್ಕೆ ಭಾಷ್ಯವನ್ನು ಬರೆಯುತ್ತಾ ಆದಿ ಶಂಕರರು (ಕ್ರಿ.ಶ. ೭೮೮-೮೨೦) ತಮ್ಮ ಟೀಕೆಗೆ ಸಾಂಖ್ಯ ಪದ್ಧತಿಯನ್ನು, “ಪ್ರಧಾನ-ಮಲ್ಲ-ನಿಭರ್ಹಣ-ನ್ಯಾಯೇನ” ಅಂದರೆ “ಪ್ರಧಾನ ಜಟ್ಟಿಯನ್ನು ಸೋಲಿಸುವ ತರ್ಕ”ಕ್ಕನುಗುಣವಾಗಿ ಆರಿಸಿಕೊಂಡೆನೆಂದು ತಿಳಿಸುತ್ತಾರೆ. “ಒಬ್ಬ ಹೆಸರುವಾಸಿಯಾದ ಜಟ್ಟಿಯು ತನ್ನ ವಿರುದ್ಧ ಪಾಳಯದ ಪ್ರಧಾನ ಜಟ್ಟಿಯನ್ನು ಮೊದಲು ಸೋಲಿಸಿದರೆ, ಉಳಿದವರೊಂದಿಗೆ ಸೆಣಸುವ ಅವಶ್ಯಕತೆಯೇ […]

ದರ್ಶನಗಳ ಸಾಮಾನ್ಯ ಪರಿಚಯ

Thursday, August 16th, 2012

ಸಾಮಾನ್ಯ ಪರಿಚಯ ತತ್ವಜ್ಞಾನದ ಅವಶ್ಯಕತೆ:           ಒಮ್ಮೆ ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಬಯಕೆಗಳು ಈಡೇರಿದರೆ ಅವನು ಸಹಜವಾಗಿ ಜೀವನದ ಉದ್ದೇಶವೇನು ಎಂದು ಅನ್ವೇಷಿಸತೊಡಗುತ್ತಾನೆ. ಈ ಅನ್ವೇಷಣೆಯ ಪರಿಣಾಮವೇ ತತ್ವಜ್ಞಾನ ಅಥವಾ ತತ್ವಶಾಸ್ತ್ರ. ಸಾಮಾನ್ಯ ಅರ್ಥದಲ್ಲಿ ತತ್ವಶಾಸ್ತ್ರವೆಂದರೆ “ಜ್ಞಾನದ ಬಗೆಗಿನ ಪ್ರೀತಿ” ಎನ್ನುವುದು. ಆದರೆ, ಭಾರತೀಯ ಚಿಂತಕರು ಬೌದ್ಧಿಕ ಕಸರತ್ತಿನಿಂದ ದೊರೆಯ ಬಹುದಾದ ಈ ರೀತಿಯ ಜ್ಞಾನದ ಬಗೆಗಿನ ಪ್ರೀತಿಯನ್ನು ಬದಿಗಿರಿಸಿ ಮುಂದೆ ಸಾಗಿ ಹೋಗಿ ತಮಗೆ ಜೀವನದ  ಔನ್ನತ್ಯವನ್ನು ತಿಳಿಸಿಕೊಡುವ ಅತೀಂದ್ರಿಯ ಅನುಭವದ ಹೊಸ್ತಿಲಿನಲ್ಲಿ […]

ವೈಶೇಷಿಕ ದರ್ಶನ

Thursday, August 16th, 2012

ಪರಿಚಯ:           ವೈಶೇಷಿಕ ದರ್ಶನವು ಕಣಾದ ಅಥವಾ ಉಲೂಕನಿಂದ ಸ್ಥಾಪಿಸಲ್ಪಟ್ಟಿತು. ಆದ್ದರಿಂದ ಅದನ್ನು ‘ಕಾಣಾದ’ ಅಥವಾ ‘ಔಲೂಕ್ಯ’ ದರ್ಶನ ಎಂದೂ ಕರೆಯುತ್ತಾರೆ. ಕಣಾದ ಎನ್ನುವುದು ಉಲೂಕನ ಅನ್ವರ್ಥ ನಾಮವೆಂದು ಕಾಣುತ್ತದೆ. ಏಕೆಂದರೆ ಅವನು ಋಷಿಗಳಂತೆ ಜೀವನ ನಡೆಸಿ ರೈತರ ಹೊಲಗಳಿಂದ ಹೆಕ್ಕಿದ ಕಾಳುಗಳನ್ನು ತಿನ್ನುತ್ತಿದ್ದ. (ಕಣ=ಕಾಳು; ಅದ್=ತಿನ್ನು)           ಈ ದರ್ಶನಕ್ಕೆ ಕಣಾದನ ‘ವೈಶೇಷಿಕ ಸೂತ್ರ’ಗಳು ಮೂಲ ಗ್ರಂಥವಾಗಿದೆ. ಅದು ಹತ್ತು ಅಧ್ಯಾಯಗಳು ಅಥವಾ ಪುಸ್ತಕಗಳಿಂದ ಒಡಗೂಡಿದೆ ಮತ್ತು ಪ್ರತಿಯೊಂದೂ ಅಧ್ಯಾಯವು ಎರಡು ‘ಅಹ್ನಿಕ’ ಅಥವಾ ವಿಭಾಗಗಳನ್ನು […]

ಅನರ್ಘ್ಯ ರತ್ನಗಳು

Thursday, July 26th, 2012

ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  ಶರಣಾಗತಿಯನ್ನು ಸಾದರ ಪಡಿಸುತ್ತದೆ. ತನಗೆ ಇದ್ದ ಪ್ರಾಯದ ಅವಳಿ  ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ.   ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ […]

ವೇದದಲ್ಲಿ ಗೋಮಾಂಸ ಸೇವನೆ ಇಲ್ಲ

Monday, July 16th, 2012

[ಕೃಪೆ ಅಗ್ನಿವೀರ್] ಈ ಕೆಳಗೆ ಮಂಡಿಸಿರುವ ವಿಷಯವು ಪೂರ್ಣವಾಗಿ ಹಾಗು ನಿಷ್ಪಕ್ಷಪಾತವಾಗಿ ವೇದಗಳು, ಅದರ ಅನ್ವಯ, ವ್ಯಾಕರಣ, ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ವೇದ ಮಂತ್ರಗಳ ಹಾಗು ಅದರ ಸರಿಯಾದ ಉದ್ದೇಶವನ್ನು ಆದರಿಸುವಂತಾದ್ದಾಗಿದೆ. ಆದ್ದರಿಂದ ಇದು ಮಾಕ್ಸ್ ಮುಲ್ಲರ್, ಗ್ರಿಫ಼ತ್, ವಿಲ್ಸನ್, ವಿಲಿಯಂಸ್ ಹಾಗು ಇತರ ಭಾರತ ದೇಶದ ಅನ್ವೇಶಕರ ಅಭಿಪ್ರಾಯವನ್ನು ಕುರುಡಾಗಿ ಪ್ರತಿಬಿಂಬಿಸುತ್ತಿಲ್ಲ. ಇವರ ಅನ್ವೇಷಣೆಯು ಪಾಶ್ಚಾತ್ಯ ದೇಶದಲ್ಲಿ ಪ್ರಸಿದ್ದಿ ಹೊಂದಿದ್ದರು ನಮಗೆ ಹಲವಾರು ಬಲವಾದ ಕಾರಣಗಳಿಂದ ಅವರ ಅನ್ವೇಷಣೆಯು ಕಪೋಲಕಲ್ಪಿತ ಹಾಗು ನ್ಯಾಯಯುತವಾಗಿಲ್ಲ ಎಂದು […]

ವಿವೇಕ ಚೂಡಾಮಣಿ

Wednesday, July 4th, 2012

ಗ್ರಂಥದ ಆರಂಭದ ಶ್ಲೋಕವು ಹೀಗಿದೆ सर्व वेदांतसिद्धांत गोचरमं तमगोचरम् । गोविन्दं परमानन्दं सद्गुरुं प्रणतोस्म्हम् ॥१॥ ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ. ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ […]